ಸೋಮವಾರಪೇಟೆ, ಏ. 24: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕುರಿತ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಡಿಕೇರಿಯ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು.
ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಳ್ಳರಿಮಾಡುವಿನ ಚೈತ್ರ, ದ್ವಿತೀಯ ಸ್ಥಾನ ಪಡೆದ ಸೋಮವಾರಪೇಟೆಯ ನ.ಲ. ವಿಜಯ, ತೃತೀಯ ಸ್ಥಾನ ಪಡೆದ ಪುಟ್ಟಣ್ಣ ಆಚಾರ್ಯ ಅವರುಗಳು ಬಹುಮಾನಕ್ಕೆ ಭಾಜನರಾದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭ, ಉಪನಿರ್ದೇಶಕಿ ಅರುಂದತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಮ್ತಾಜ್ ಬೇಗಂ, ಸಿಬ್ಬಂದಿ ಜಯಂತಿ ಅವರುಗಳು ಬಹುಮಾನ ವಿತರಿಸಿದರು.