ಗೋಣಿಕೊಪ್ಪಲು.ಏ.24:ತನ್ನ ಅತ್ತೆಯನ್ನು ಅವಮಾನಿಸಿದ್ದನ್ನು ತಡೆಯಲಾರದೆ ಅಳಿಯ ಅಣ್ಣಪ್ಪ ಹಾಗೂ ರವಿ ಎಂಬವರುಗಳು ಸೇರಿ ಸುಬ್ರ (26) ಎಂಬಾತನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಣಿಕೊಪ್ಪಲುವಿನ ನಿವಾಸಿಯಾದ ಅಣ್ಣಪ್ಪ, ಹಾಗೂ ರವಿ ಸೀಗೆತೋಡು ಸಮೀಪದ ಲೈನ್ ಮನೆಯಲ್ಲಿ ತನ್ನ ಅತ್ತೆಯೊಂದಿಗೆ ವಾಸವಾಗಿದ್ದರು. ಮನೆಯ ಸಮೀಪ ಇನ್ನೊಂದು ಲೈನ್ ಮನೆ ಯಲ್ಲಿ ಸುಬ್ರ ವಾಸವಾಗಿದ್ದ. ಇತ್ತೀಚಿನ ದಿನದಲ್ಲಿ ಸುಬ್ರ ಅತ್ತೆಯನ್ನು ಅವಮಾನಿಸುತ್ತಿರುವದು ಕಂಡು ಬಂದ (ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಸುಬ್ರನ ಮೇಲೆ ಅಣ್ಣಪ್ಪ ಹಾಗೂ ರವಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡ ಸುಬ್ರನನ್ನು ಅಕ್ಕಪಕ್ಕದವರು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ದಾರಿ ಮಧ್ಯೆ ಸುಬ್ರ ಕೊನೆಯುಸಿರೆಳೆದಿದ್ದಾನೆ. ರಾತ್ರಿ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತೆರಳಿದ ಎಸ್‍ಐ ಶ್ರೀಧರ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.