ಮಡಿಕೇರಿ, ಏ. 23: ಮಡಿಕೇರಿಯ ಜ್ಯೋತಿ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ತರಗತಿ ವತಿಯಿಂದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರಿಗೆ ಕ್ಯಾಲಿಗ್ರಫಿ ಸಂಬಂಧಿತ ಎರಡು ದಿನಗಳ ಉಚಿತ ಕಾರ್ಯಾಗಾರ ನಡೆಯಿತು.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷ ಎಂ.ಈ. ಚಿಣ್ಣಪ್ಪ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು, ಉತ್ತಮ ಅಕ್ಷರ ಕೂಡ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿ ಎಂದರು. ಮುಖ್ಯ ಅತಿಥಿಗಳಾಗಿದ್ದ ಶಾಲಾ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ಉಷಾ ಅಯ್ಯಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಜ್, ಸಮಾಜ ಸೇವಕಿ ಸಲೀಲಾ ಪಾಟ್ಕರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಳೆದ ವರ್ಷ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ಕಲಿತ ವಿದ್ಯಾರ್ಥಿ ಗಳಿಗೆ ಸರ್ಟಿಫಿಕೇಟು ಗಳನ್ನು ವಿತರಿಸಲಾಯಿತು. ಸುಝ್ಝೇನ್ ಮತ್ತು ಯವನಿ ನಿರೂಪಿಸಿ, ಜಿ.ವಿ. ಶ್ರೀದೇವಿ ಹಾಗೂ ಜಿ.ಯು. ಶ್ರೀಲತಾ ವಂದಿಸಿದರು. ಶಿಬಿರ ಆಯೋಜಿಸಿದ್ದ ಜ್ಯೋತಿ ಕ್ಯಾಲೀಗ್ರಫಿ ಮತ್ತು ಹ್ಯಾಂಡ್ ರೈಟಿಂಗ್ ತರಗತಿಯ ಮುಖ್ಯಸ್ಥೆ ನಮಿತಾ ರಾವ್ ಹಾಜರಿದ್ದರು.