ಚೆಟ್ಟಳ್ಳಿ, ಏ. 23: ಸಂಸ್ಕøತಿ, ಆಚಾರ ವಿಚಾರ, ಜನಜಾಗೃತಿಯನ್ನು ಕೊಡವ ಮಹಿಳೆಯರಲ್ಲಿ ಮೂಡಿಸುವ ನಿಟ್ಟಿನಲ್ಲಿ ಚೆಟ್ಟಳ್ಳಿ ಕೊಡವ ಪೊಮ್ಮಕ್ಕಡ ಕೂಟವನ್ನು ಸ್ಥಾಪಿಸಲಾಗಿದೆ.

ತಾ. 20 ರಂದು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಸಂಘಕ್ಕೆ ಜೋಮಾಲೆ ಕೊಡವ ಕೂಟವೆಂದು ನಾಮಕರಣ ಮಾಡಲಾಯಿತು. ಕೂಟದ ಅಧ್ಯಕ್ಷೆಯಾಗಿ ಮುಳ್ಳಂಡ ಶೋಭಾ ಚಂಗಪ್ಪ, ಕಾರ್ಯದರ್ಶಿಯಾಗಿ ಐಚೆಟ್ಟಿರ ಸುನಿತಾ ಮಾಚಯ್ಯ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಭೆಯಲ್ಲಿ ಸರ್ವ ಸದಸ್ಯರ ಸಭೆ ಕರೆದು ನಿರ್ದೇಶಕರ ಆಯ್ಕೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯ ಸದಸ್ಯರಾದ ಕೊಂಗೇಟಿರ ಕುಸುಮ ಪೊನ್ನಪ್ಪ, ಪುತ್ತರಿರ ಪ್ರೇಮ ಭೀಮಯ್ಯ ಹಾಜರಿದ್ದರು. ಪಳಂಗಂಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿದರು.