ಶನಿವಾರಸಂತೆ, ಏ. 23: ಶನಿವಾರಸಂತೆ ಹೋಬಳಿ ಲಯನ್ಸ್ ಕ್ಲಬ್‍ನ ಮಾಸಿಕ ಸಭೆ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯಲ್ಲಿ ಅಧ್ಯಕ್ಷ ರವಿಕಾಂತ್ ಎಸ್.ಎಸ್. ಗೌಡ ಸಭೆಯ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂದಿನ ದಿನಗಳಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಕಣ್ಣು ತಪಾಸಣಾ ಶಿಬಿರವನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಲಯನ್ಸ್ ಕ್ಲಬ್ ವತಿಯಿಂದ ನಗರದ ಮುಖ್ಯ ಸ್ಥಳಗಳಲ್ಲಿ ಮಾರ್ಗ ಸೂಚನಾಫಲಕಗಳನ್ನು ಅಳವಡಿಸುವಂತೆ ನಿರ್ಧರಿಸಲಾಯಿತು. ಗುಡುಗಳಲೆಯಲ್ಲಿ ಕಸದ ತೊಟ್ಟಿಯನ್ನು ಇರಿಸುವಂತೆ ಚರ್ಚಿಸಲಾಯಿತು. ಲಯನ್ಸ್ ಕ್ಲಬ್‍ನ ಅಂತರರಾಷ್ಟ್ರೀಯ ಹಾಗೂ ಜಿಲ್ಲಾ ವಂತಿಕೆಯನ್ನು ಪಾವತಿಸಬೇಕಾಗಿರುವದರಿಂದ ಎಲ್ಲಾ ಸದಸ್ಯರುಗಳ ಸಹಕಾರವನ್ನು ಕೋರಲಾಯಿತು.

ಲಯನ್ಸ್ ಕ್ಲಬ್‍ನ 3ನೇ ಉಪಾಧ್ಯಕ್ಷ ಜಿ. ನಾರಾಯಣಸ್ವಾಮಿ ಕೆಲವು ದಿನಗಳ ಹಿಂದೆ ಅಮೇರಿಕ ಪ್ರವಾಸದಿಂದ ಹಿಂದಿರುವಾಗ ಅಮೇರಿಕದಲ್ಲಿರುವ ತಮ್ಮ ಪುತ್ರನ ಸ್ನೇಹಿತರು, ಲಯನ್ಸ್ ಕ್ಲಬ್‍ನ ಸೇವಾ ಕಾರ್ಯವನ್ನು ಮೆಚ್ಚಿ ಲಯನ್ಸ್ ಕ್ಲಬ್‍ಗೆ ಅಮೇರಿಕನ್ 300 ಡಾಲರ್ ಹಣವನ್ನು ನೀಡಿದ್ದರು. ಈ ಬಗ್ಗೆ ನಡೆದ ಸಭೆಯಲ್ಲಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಜಿ. ನಾರಾಯಣ ಸ್ವಾಮಿಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಬಿ.ಕೆ. ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಕ್ಲಬ್ ಸದಸ್ಯ ಚಂದ್ರಶೇಖರ್ ಧ್ವಜವಂದನೆ ಮಾಡಿದರು. ಕಾರ್ಯದರ್ಶಿ ಲಯನ್ ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಎಂ.ಆರ್. ನಿರಂಜನ್ ವಂದಿಸಿದರು. ಉಪಾಧ್ಯಕ್ಷರುಗಳಾದ ನಾರಾಯಣ ಸ್ವಾಮಿ, ಎನ್.ಬಿ. ನಾಗಪ್ಪ, ಬಿ.ಸಿ. ಧರ್ಮಪ್ಪ, ಸದಸ್ಯರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.