ಸೋಮವಾರಪೇಟೆ, ಏ. 22: ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಪಟ್ಟಣ ಹಾಗೂ ಸುತ್ತಮುತ್ತಲ 12 ಅಂಗನವಾಡಿಗಳಿಗೆ ರೂ. 20 ಸಾವಿರ ಮೌಲ್ಯದ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ ಅಂಗನವಾಡಿಯಲ್ಲಿ ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಪಿ.ಕೆ. ರವಿ ಮಾತನಾಡಿ, ಸರ್ಕಾರದಿಂದ ಅಂಗನವಾಡಿಗಳಿಗೆ ಹತ್ತು ಹಲವು ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಮಕ್ಕಳಿಗೆ ಆಟದ ಸಾಮಾನುಗಳು, ಕುರ್ಚಿ, ಶುದ್ಧಕುಡಿಯುವ ನೀರಿನ ಯಂತ್ರಗಳು ಸೇರಿದಂತೆ ಇತರೆ ಅಗತ್ಯವಾದ ಸೇವೆಯನ್ನು ರೋಟರಿ ಮೂಲಕ ನೀಡಲಾಗಿದೆ ಎಂದರು. ಈ ಸಂದರ್ಭ ಪದಾಧಿಕಾರಿ ಗಳಾದ ಬಿ.ಎಸ್. ಸದಾನಂದ್, ಬಿ.ಎಸ್. ಸುಂದರ್, ಡಿ.ಪಿ. ರಮೇಶ್, ಮಲ್ಲೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಣ್ಣಯ್ಯ ಉಪಸ್ಥಿತರಿದ್ದರು.