ಮಡಿಕೇರಿ, ಏ. 22: ದೊಡ್ಡಪುಲಿಕೋಟು ಗ್ರಾಮದಲ್ಲಿರುವ ಬಿಎಸ್ಎನ್ಎಲ್ ಟವರ್ ಯಾವದೇ ಪ್ರಯೋಜನ ಇಲ್ಲದಂತಾಗಿದೆ. ಇಲ್ಲಿರುವ ಸಮಸ್ಯೆ ಬಗ್ಗೆ ಅಧಿಕಾರಿ ಗಳಿಗೆ ತಿಳಿಸಿದರೂ ಮೊದಲೆರಡು ಬಾರಿ ಈ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಿದರೂ ಸಹ ಯಾವದೇ ಪ್ರಯೋಜವಿಲ್ಲದಂತಾಗಿದೆ. ಈ ಗ್ರಾಮದಲ್ಲಿ ಇದೊಂದೇ ಟವರ್ ಇರುವದರಿಂದ ಗ್ರಾಮಸ್ಥರಿಗೆ ನೆಟ್ವರ್ಕ್ ಸಮಸ್ಯೆಯಾಗಿ ಪರಿಣಮಿಸಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ ದೊಡ್ಡ ಪುಲಿಕೋಟುವಿನಲ್ಲಿರುವ ಬಿಎಸ್ಎನ್ಎಲ್ ಕಚೇರಿಗೆ ಬೀಗ ಜಡಿಯುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.