ಬಿಡುವಿದ್ದಾಗ ಪುಸ್ತಕಗಳನ್ನು ಓದಬೇಕು,
ಬಿಡುವಿಲ್ಲದಿದ್ದಾಗ ಮನಸ್ಸುಗಳನ್ನು ಓದಬೇಕು
ಒಟ್ಟಿನಲ್ಲಿ ಸದಾ ಓದುತ್ತಲೇ ಇರಬೇಕು.
- ರವೀಂದ್ರನಾಥ ಠಾಗೂರ್
ಪುಸ್ತಕಗಳು ಜ್ಞಾನದ ಭಂಡಾರ. ಪುಸ್ತಕಗಳ ಒಡನಾಟವಿದ್ದವನು ಮಾತ್ರ ಜ್ಞಾನಿಯಾಗಬಲ್ಲನು. ಹಾಗಾಗಿಯೇ ‘ದೇಶ ಸುತ್ತು, ಕೋಶ ಓದು’ ಎಂಬ ಗಾಧೆ ಇರೋದು. ನಾವು ವ್ಯಕ್ತಿಗಳನ್ನು ನಂಬಿ ಕೆಟ್ಟಿರಬಹುದು ಆದರೆ ಪುಸ್ತಕಗಳನ್ನು ನಂಬಿ ಕೆಡಲು ಸಾಧ್ಯವೇ ಇಲ್ಲ.
ಇಂದು ಈ ದಿನವನ್ನು ಜಗತ್ತಿನಾದ್ಯಂತ ಪುಸ್ತಕ ದಿನಾಚರಣೆ ಅಥವಾ ಕೃತಿ ಸ್ವಾಮ್ಯ ದಿನಾ ಚರಣೆ ಎಂದು ಆಚರಿ ಸಲಾಗುತ್ತದೆ. ಓದು ಗಾರಿಕೆ, ಪ್ರಕಟ ಗೊಳಿಸುವಿಕೆ, ಮತ್ತು ಕೃತಿ ಸ್ವಾಮ್ಯಕ್ಕೆ ಒಳಪಡಿಸುವ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಯುನೈಟೆಡ್ ನೇಷನ್ಸ್ ಎಜ್ಯುಕೇಶನ್, ಸೈನ್ಟಿಫಿಕ್ ಹಾಗೂ ಕಲ್ಚರಲ್ ಆರ್ಗನೈಸೇಶನ್ (UಓಇSಅಔ) 23 ಏಪ್ರಿಲ್ ದಿನಾಂಕವನ್ನು ನಿಗದಿಪಡಿಸಿ, 1995 ರಲ್ಲಿ ಆಚರಣೆಗೆ ತಂದಿತು.
ಇದನ್ನು ಯು.ಎಸ್.ಎಯಲ್ಲಿ ಸ್ಟ್ರೀಟ್ ಫೆಸ್ಟಿವಲ್ ಮಾಡುವ ಮುಖಾಂತರ ಆಚರಿಸಿದರೆ, ರಷ್ಯಾ ಮತ್ತು ಐರ್ಲ್ಯಾಂಡಿನಲ್ಲಿ ಚಾರಿಟಿಯ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಉಳಿದಂತೆ ಸ್ವೀಡನ್, ಕ್ಯಾಟಲೋನಿ ಯಾದಲ್ಲಿ ಕೂಡ ಅರ್ಥಪೂರ್ಣವಾಗಿ ಈ ದಿನಾಚರಣೆಯಾಗುತ್ತದೆ.
ಈಗಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿಗಳನ್ನು ಜಿಬಿಗಳಷ್ಟು ಹಾಕುವದು, ಯಾರ್ ಯಾರದೋ ಟ್ರೋಲ್ ಮಾಡುವದನ್ನು ಬಿಟ್ಟು ಪುಸ್ತಕಗಳ ಜೊತೆಗೆ ಸಮಯ ಕಳೆದರೆ ಖಂಡಿತ ಅದು ಯಶಸ್ಸಿಗೆ ಕಾರಣವಾಗಬಲ್ಲದು. ಹಾಗಾಗಿ ದಿನವೂ ನಾವೆಲ್ಲರೂ ಪುಸ್ತಕ ದಿನಾಚರಣೆ ಯಂದಾದರೂ ಪುಸ್ತಕಗಳನ್ನು ಬಿಡುವಿದ್ದಾಗಲೆಲ್ಲಾ ಓದುತ್ತೇವೆ ಎಂದು ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿಕೊಳ್ಳೋಣ. ಏನಂತೀರಾ?
- ರಜತ್ ರಾಜ್ ಡಿ. ಹೆಚ್., ಮಡಿಕೇರಿ.