ಚೆಟ್ಟಳ್ಳಿ, ಏ. 20: ಚೆಟ್ಟಳ್ಳಿಯ ಈರಳೆ ಶ್ರೀ ಪೊವ್ವೊದಿ (ಭಗವತಿ) ದೇವಾಲಯದ ನೂತನ ಅಡುಗೆ ಕೋಣೆ ಉದ್ಘಾಟನೆಗೊಂಡಿತು. ತಾ. 14 ರ ಪೂರ್ವಾಹ್ನ ಊರಿನ ಮಹಿಳೆಯರು ನೂತನ ಅಡುಗೆ ಕೋಣೆಯಲ್ಲಿ ಹಾಲು ಉಕ್ಕಿಸಿದರು. ದೇವತಕ್ಕರು ಹಾಗೂ ಊರುತಕ್ಕರ ಸಮ್ಮುಖದಲ್ಲಿ ಈರಳೆ ಪೊವ್ವೊದಿಗೆ ಬಿಸುವಿನ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೊರಿಮಂಡ ದಿನಮಣಿ ಪೂವಯ್ಯ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹಾಗೂ ಊರಿನವರು ಹಾಜರಿದ್ದರು.