ಗೋಣಿಕೊಪ್ಪಲು, ಏ. 20: ಇಲ್ಲಿಗೆ ಸಮೀಪ ಬಲ್ಯಮುಂಡೂರು ಗ್ರಾಮದ ಶ್ರೀ ಮಾರಮ್ಮ ತಾಯಿಯ ವಾರ್ಷಿಕೋತ್ಸವ ತಾ. 23, 24 ರಂದು ಜರುಗಲಿದೆ.
ತಾ. 23 ರಂದು ದೇವಿ ಲಕ್ಷ್ಮಣ ತೀರ್ಥ ನದಿಗೆ ಜಳಕಕ್ಕೆ ತೆರಳುವದು, ರಾತ್ರಿ 7 ಗಂಟೆಗೆ ಗುಡಿಯನ್ನು ತಲಪುವದು. ಅಂದು ವಿಶೇಷ ದರ್ಶನ ಇರುತ್ತದೆ.
ತಾ. 24 ರಂದು ಬೆಳಗ್ಗಿನ ಜಾವ 4 ಗಂಟೆಯಿಂದ ಪೂಜಾ ವಿಧಿವಿಧಾನಗಳು ಆರಂಭ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಹರಕೆ, ಕಲಶ ಪೂಜೆ ಇತ್ಯಾದಿ ನಡೆಯಲಿದೆ.