ನಾಪೆÇೀಕ್ಲು, ಏ. 18: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣಾ ಮತದಾನವು ಶಾಂತಿಯುತವಾಗಿ ನೆರವೇರಿತು. ಹೊದವಾಡದ ಸರಕಾರಿ ಶಾಲಾ 264ನೇ ಬೂತ್‍ನಲ್ಲಿ ಮತ್ತು ನಾಪೆÇೀಕ್ಲು ಸರಕಾರಿ ಪ್ರೌಢಶಾಲಾ ಬೂತ್‍ನಲ್ಲಿ ಮತಯಂತ್ರದ ದೋಷದಿಂದಾಗಿ ಸುಮಾರು ಒಂದೂವರೆ ಗÀಂಟೆ ತಡವಾಗಿ ಮತದಾನ ಆರಂಭಗೊಂಡಿತು.

ಉಳಿದಂತೆ ಎಲ್ಲಾ ಕಡೆಗಳಲ್ಲಿಯೂ ಮತದಾನಕ್ಕೆ ಯಾವದೇ ತೊಡಕು ಉಂಟಾಗಲಿಲ್ಲ. ಎಲ್ಲಾ ಕಡೆಗಳಲ್ಲಿಯೂ ಮತದಾರರು ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಆಗಮಿಸುತ್ತಿರುವದು ಕಂಡು ಬಂತು. ಅಪರಾಹ್ನ 3 ಗಂಟೆಗೆ ಈ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನಲೆಯಲ್ಲಿ ಮತದಾನಕ್ಕೆ ಸ್ವಲ್ಪ ತೊಡಕು ಉಂಟಾಯಿತು. ನಾಲಡಿ, ಯವಕಪಾಡಿ, ನೆಲಜಿ, ಕಕ್ಕಬ್ಬೆ, ಪೇರೂರು ಮತದಾನ ಕೇಂದ್ರಗಳಲ್ಲಿ ನಕ್ಷಲರ ಭೀತಿಯ ಹಿನ್ನಲೆಯಲ್ಲಿ ಹೆಚ್ಚಿನ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು.