ಮಡಿಕೇರಿ, ಏ. 19: ಯಾವದೇ ಸಾಧನೆ ಮಾಡಬೇಕಿದ್ದರೂ ಮೊದಲು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿರಬೇಕೆಂದು ಜಿಲ್ಲಾ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಸುನಿತಾ ಅವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.ವಾಂಡರರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ. ಶಂಕರ್ ಸ್ಮರಣಾರ್ಥ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರಕ್ಕೆ ಆಗಮಿಸಿ ಅವರು ಶಿಬಿರಾರ್ಥಿಗಳಿಗೆ ಆರೋಗ್ಯವಂತಾಗಿರಲು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು. ಆರೋಗ್ಯವಂತರಾಗಿರಲು ಬಳಸುವ ಆಹಾರದಲ್ಲಿ ಮಿತವಿರಬೇಕು., ಯೋಗ, ವ್ಯಾಯಾಮಗಳನ್ನು ಅನುಸರಿಸಬೇಕೆಂದರು. ಪ್ರಮುಖವಾಗಿ ಸ್ವಚ್ಛತೆಯೆಡೆಗೆ ಗಮನಹರಿಸಬೇಕು, ಮನಸು ಹಾಗೂ ದೇಹವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಆರೋಗ್ಯದಿಂದಿರಲು ಸಾಧ್ಯ ಎಂದರು.

ಮತ್ತೋರ್ವ ಅತಿಥಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತತರಾದ ಸೌಮ್ಯ ಅವರು ಯೋಗ, ಪ್ರಾಣಾಯಾಮ ಮಾಡುವ ವಿಧಾನವನ್ನು ಶಿಬಿರಾರ್ಥಿಗಳಿಗೆ ಸ್ವತಃ ಮಾಡಿ ತೋರಿಸಿದರು. ಈ ಸಂದರ್ಭದಲ್ಲಿ ಶಿಬಿರದ ರೂವಾರಿಗಳಾದ ವಾಂಡರರ್ಸ್ ಕ್ಲಬ್‍ನ ಬಾಬು ಸೋಮಯ್ಯ, ಶಾಂ ಪೂಣಚ್ಚ, ದೈಹಿಕ ಶಿಕ್ಷಕರಾದ ವೆಂಕಟೇಶ್, ಲಕ್ಷ್ಮಣ್‍ಸಿಂಗ್, ಗಣೇಶ್, ಅಶೋಕ್ ಅಯ್ಯಪ್ಪ ಮುಂತಾದವರಿದ್ದರು.