ಗುಡ್ಡೆಹೊಸೂರು, ಏ. 15: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಮಿನಿ ಲಾರಿ ಮತ್ತು ಬೈಕ್‍ಗಳ ನಡುವೆ ಡಿಕ್ಕಿಯಾಗಿ ವೀರಾಜಪೇಟೆ ತಾಲೂಕು ಚನ್ನಂಗಿ ಗ್ರಾಮದ ನಿವಾಸಿ ದೇವರಾಜ್ ಎಂಬವರ ಪುತ್ರ ಸ್ಮಿತಲ್ ಸ್ಥಳದಲ್ಲಿಯೆ ವೃತಪಟ್ಟರೆ ಪುನಿತ್‍ನ ಸ್ಥಿತಿ ಗಂಭಿರವಾಗಿದೆ. ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಮಿತಲ್ ಮತ್ತು ಪುನಿತ್ ಸಿದ್ದಾಪುರ ಕಡೆಯಿಂದ ಕುಶಾಲನಗರದತ್ತ್ತ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದರು. ಜಲ್ಲಿಕಲ್ಲು ತುಂಬಿದ್ದ ಲಾರಿ ಕುಶಾಲನಗರದಿಂದ ಸಿದ್ದಾಪುರ ಕಡೆ ಚಲಿಸುತ್ತಿತ್ತು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ (ಕೆ.ಎ.12.ಎ.3536) ಕಳೆದ ಒಂದು ವಾರದಲ್ಲಿ ಗುಡ್ಡೆಹೊಸೂರು ಸುತ್ತ ಮುತ್ತ ಹಲವು ಅಪಘಾತಗಳು ನಡೆದು 4 ಮಂದಿ ಯುವಕರು ಜೀವ ಕಳೆದುಕೊಂಡಿದ್ದಾರೆ. ಹಲವು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.