ಸೋಮವಾರಪೇಟೆ, ಏ.12: ಸಮೀಪದ ಬೆಟ್ಟದಳ್ಳಿ ಗ್ರಾಮದ ಸಿದ್ದಾರ್ಥನಗರದ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಮಾನವತಾ ಯುವಕ ಸಂಘದ ಆಶ್ರಯದಲ್ಲಿ ತಾ. 14ರಂದು ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ದಿನಾಚರಣೆ ಮತ್ತು ತಾಲೂಕು ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ಹಗ್ಗಜಗ್ಗಾಟ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಬಿ. ಆನಂದ ತಿಳಿಸಿದ್ದಾರೆ.

ತಾ. 14ರಂದು ಪೂರ್ವಾಹ್ನ 10 ಗಂಟೆಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ವಕೀಲ ಬಿ.ಈ. ಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪತ್ರಕರ್ತ ಎಸ್.ಎ. ಮುರುಳೀಧರ್, ಉದ್ಯಮಿ ಹರಪಳ್ಳಿ ರವೀಂದ್ರ, ಕೊತ್ನಳ್ಳಿ ಅರುಣ್, ಜಕ್ಕನಳ್ಳಿ ಗ್ರಾಮಾಧ್ಯಕ್ಷ ಅರುಣ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ನಂತರ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಹಗ್ಗಜಗ್ಗಾಟ, ಅಂಗನವಾಡಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ತಾ. 15ರಂದು ಅಪರಾಹ್ನ 3 ಗಂಟೆಗೆ ಬಹುಮಾನ ವಿತರಣೆ ಮತ್ತು ಸಂಜೆ 6 ರಿಂದ ಗಂಧರ್ವ ಕಲಾ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.