ಗೋಣಿಕೊಪ್ಪ ವರದಿ, ಏ. 12 : ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಪಟ್ಟಣದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಉಮಾಮಹೇಶ್ವರಿ ದೇವಸ್ಥಾನ ಸಮೀಪವಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆಯಲ್ಲಿರುವ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಮಳಿಗೆಯಲ್ಲಿದ್ದ ಕುಶನ್ ಹಾಗೂ ಬಟ್ಟೆಗಳು ಬೆಂದು ಕರಕಲಾಗಿವೆ. ಸುಮಾರು 4 ಲಕ್ಷಕ್ಕೂ ಅಧಿಕ ವಸ್ತು ನಾಶವಾಗಿದೆ.

ಮುಬಾರಕ್ ಎಂಬುವವರಿಗೆ ಸೇರಿದ ಕುಶನ್ ವಕ್ರ್ಸ್ ಅಂಗಡಿಯಲ್ಲಿನ ವಸ್ತುಗಳು ಬೆಂದು ಹೋಗಿವೆ. 3 ಲಕ್ಷದಷ್ಟು ನಷ್ಟವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿನ 200 ಕ್ಕೂ ಹೆಚ್ಚು ಬಟ್ಟೆಗಳು ಸುಟ್ಟು ಕರಕಲಾಗಿದೆ. ಮದುವೆಗೆ ಕೊಟ್ಟಿದ್ದ 150 ಕ್ಕೂ ಹೆಚ್ಚು ಸೀರೆಗಳು ಬೆಂದಿದೆ. 1 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಟೈಲರ್ ಅಂಗಡಿ ಮಾಲೀಕರಾದ ಪವಿತ್ರ ತಿಳಿಸಿದ್ದಾರೆ.ಮಳೆ ಸಂದರ್ಭ ವಿದ್ಯುತ್ ಸಕ್ರ್ಯೂಟ್ ಉಂಟಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸೆಸ್ಕ್‍ಗೆ ದೂರು ನೀಡಲಾಗಿದೆ.