ಸೋಮವಾರಪೇಟೆ, ಏ.12: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ಸೇವಾ ಸಮಿತಿ ವತಿಯಿಂದ ತಾ. 21 ರಿಂದ 23 ರವರೆಗೆ ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೋತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮಹೇಂದ್ರ ತಿಳಿಸಿದ್ದಾರೆ.

ತಾ. 21ರಂದು ಪೂರ್ವಾಹ್ನ 9 ಗಂಟೆಗೆ ವಾರ್ಷಿಕೋತ್ಸವ ಪ್ರಾರಂಭ ಪೂಜೆ, ತಾ. 22ರಂದು ಗಣಪತಿ ಹೋಮ, ಕ್ರೀಡಾಕೂಟ, ತಾ. 23ರಂದು ವಾರ್ಷಿಕ ಮಹಾ ಪೂಜೋತ್ಸವ, ಅನ್ನದಾನ, ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ಉದ್ಯಮಿ ಹರಪಳ್ಳಿ ರವೀಂದ್ರ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ತಂಗಮ್ಮ, ಬಿ.ಬಿ. ಸತೀಶ್, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಉಪಾಧ್ಯಕ್ಷ ಮಿಥುನ್, ಸದಸ್ಯ ಶಿವಪ್ಪ, ಪಿಡಿಓ ರವೀಶ್, ಜಿಪಂ ಮಾಜೀ ಸದಸ್ಯ ಸಂಜಯ್ ಜೀವಿಜಯ, ಜೆಡಿಎಸ್ ತಾಲೂಕು ಅಧ್ಯಕ್ಷ ಸುರೇಶ್, ಸಮಿತಿಯ ಗೌರವಾಧ್ಯಕ್ಷೆ ಸುಶೀಲ ಅವರುಗಳು ಭಾಗವಹಿಸಲಿದ್ದಾರೆ.