ಮಡಿಕೇರಿ, ಏ. 12: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಪರ ನಗರದ ಗೌಳಿ ಬೀದಿಯಲ್ಲಿ ಮೈತ್ರಿ ಕಾರ್ಯ ಕರ್ತರು ಮತಯಾಚಿಸಿದರು. ಮೈತ್ರಿ ಕೂಟದ ಪ್ರಮುಖರು ಮನೆ ಮನೆಗೆ ತೆರಳಿ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅಭ್ಯರ್ಥಿಯ ಗೆಲವಿಗೆ ಸಹಕರಿಸು ವಂತೆ ಕೋರಿದರು. ಈ ಸಂದರ್ಭ ಮಾತ ನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಇ. ಮ್ಯಾಥ್ಯು, ವಿಜಯ ಶಂಕರ್ ಅವರ ಗೆಲವು ಖಚಿತ ವೆಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಜೆ.ಸಿ. ರಮೇಶ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜೆಸ್ಸಿ, ಮಹಿಳಾ ಕಾಂಗ್ರೆಸ್ ಘಟಕದ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಮಡಿಕೇರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೈಕಲ್ ಮಾರ್ಷಲ್, ನಗರ ಯುವ ಕಾಂಗ್ರೆಸ್ ಘಟಕದ ಸಂಚಾಲಕ ಜಿಯೋ ಕೆ. ಮ್ಯಾಥ್ಯು, ಪ್ರಮುಖ ರಾದ ಲಕ್ಷ್ಮೀಪ್ರಸಾದ್ ಪೆರ್ಲ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮತ್ತಿತರರು ಹಾಜರಿದ್ದರು.