ಮಡಿಕೇರಿ, ಏ. 12: 2016-18ನೇ ಸಾಲಿನ ಸ್ನಾತಕೋತ್ತರ ಪದವಿ ಬಯೋಕೆಮಿಸ್ಟ್ರಿಯಲ್ಲಿ ನವ್ಯ ರೈ ಮಂಗಳೂರು ವಿ.ವಿ.ಗೆ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಈಕೆ ಕೆ. ನಿಡುಗಣೆಯ ಹೆಬ್ಬೆಟ್ಟಗೇರಿ ನಿವಾಸಿ ಹರೀಶ್ ರೈ ಹಾಗೂ ಅಪರ್ಣಾ ರೈ ಅವರ ಪುತ್ರಿ.