*ಸಿದ್ದಾಪುರ, ಏ. 12: ಮೋದಿ ಗ್ರೂಪ್ ಅಭಿಮಾನಿ ಸಂಘದ ಯುವಕರು ಮನೆ ಮನೆಗೆ ತೆರಳಿ ಮಾತಯಾಚಿಸುತ್ತಿರುವದು ಗಮನ ಸೆಳೆದಿದೆ. ನೆಲ್ಲಿಹುದಿಕೇರಿಯ ಪ್ರಕಾಶ್ ಮಣಿಪುರ ನೇತೃತ್ವದ 200 ಮಂದಿಯ ಯುವಕರು ಪ್ರಧಾನಿ ನರೇದ್ರ ಮೋದಿ ಅಭಿಮಾನಿಗಳಾಗಿದ್ದು, ಬಿಜೆಪಿ ಪಕ್ಷದ ಬ್ಯಾನರ್ನಲ್ಲಿ ಮತಯಾಚಿಸದೆ ಮೋದಿಯ ಭಾವಚಿತ್ರವಿರುವ ಟೀ ಶರ್ಟು ಧರಿಸಿಕೊಂಡು ಪ್ರತಿದಿನ ಮನೆ ಮನೆಗೆ ತೆರಳಿ ದೇಶದ ಸುಭದ್ರತೆಗೆ ದೇಶ ಅಭಿವೃದ್ಧಿಗೆ ನರೇಂದ್ರ ಮೋದಿಗೆ ಮತ ಯಾಚಿಸುತ್ತಿದ್ದಾರೆ. ಅಭಿಮಾನಿಗಳು. ಧನ ಸಹಾಯ ನೀಡಿದ್ದೂ ಸ್ವೀಕರಿಸದೆ ಮತಯಾಚಿಸುತ್ತಿದ್ದು ವಾಲ್ನೂರು-ತ್ಯಾಗತ್ತೂರು, ಅಭ್ಯತ್ಮಂಗಲದಲ್ಲಿ ಮತದಾರರ ಗಮನಸಳೆದಿದ್ದಾರೆ.