ಗೋಣಿಕೊಪ್ಪಲು, ಏ. 10: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಘಟಕದಿಂದ ಮನೆ, ಮನೆ ಪ್ರಚಾರ ನಡೆಸಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಲಾಯಿತು.

ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ನೇತೃತ್ವ ವಹಿಸಿದ್ದರು. ನಗರ ಬಿ.ಜೆ.ಪಿ. ಅಧ್ಯಕ್ಷ ಮಲ್ಚಿರ ಗಾಂಧಿ ದೇವಯ್ಯ, ಕಾರ್ಯದರ್ಶಿ ರಾಮಕೃಷ್ಣ, ನಗರ ಮಹಿಳಾ ಉಪಾಧ್ಯಕ್ಷೆ ವಿಮಲ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಕೀಂ, ನಗರ ಸ್ಥಾನೀಯ ಸಮಿತಿ ಪ್ರಮುಖ ಜಪ್ಪು ಸುಬ್ಬಯ್ಯ, ಎ.ಇ. ಸತೀಶ್, ಶಾಜಿ ಪಿ.ಎಂ, ರಾಮ್‍ದಾಸ್, ಚೋನಿರ ಮಂಜು, ಗ್ರಾಮ ಪಂಚಾಯಿತಿ ಸದಸ್ಯೆ ನೂರೇರ ರತಿ ಅಚ್ಚಪ್ಪ, ಬಿ.ಜೆ.ಪಿ. ಮುಖಂಡೆ ಚೇಂದಂಡ ಸುಮಿ ಸುಬ್ಬಯ್ಯ ಮುಂತಾದವರು ಭಾಗವಹಿಸಿದ್ದರು.