*ಸಿದ್ದಾಪುರ, ಏ. 9: ಅಭ್ಯತ್ ಮಂಗಲ ಗ್ರಾಮದ ಗ್ರೀನ್‍ಫೀಲ್ಡ್‍ನ ವೈದ್ಯನಾಥೇಶ್ವರ ಶ್ರೀ ಕೊಟೇದ ಬಬ್ಬು ದೇವಾಲಯದ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವವು ವಿಜೃಂಭಣೆಯಿಂದ ನೇರವೇರಿತು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಡಾಳ ಜನಾಂಗದವರು 60 ವರ್ಷಗಳ ಹಿಂದೆ ತೋಟ ಕಾರ್ಮಿಕರಾಗಿ ಬಂದು ಇಲ್ಲಿ ಸೇರಿಕೊಂಡಿದಾಗ ತಮ್ಮ ಕುಲದೇವರಾದ ಶ್ರೀ ಕೋಟೆದಬಬ್ಬು ಸ್ವಾಮಿ ದೇವರನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಇಂದಿನವರೆಗೆ ಪ್ರತೀವರ್ಷ ದಕ್ಷಿಣ ಕನ್ನಡದ ಮುಂಡಾಳ ಜನಾಂಗದ ಸಂಸ್ಕøತಿ ಆಚಾರ ವಿಚಾರ ಪರಂಪರೆಯಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕೋಟೆದ ಬಬ್ಬು ದೇವರ ವಾರ್ಷಿಕೋತ್ಸವ ಹಾಗೂ ನೇಮೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.ವೈದ್ಯನಾಥೇಶ್ವರ ಶ್ರೀಕೋಟೆದ ಬಬ್ಬು ದೇವಾಲಯ ಸಮಿತಿ ಪ್ರಮುಖರಾದ ವಿಶ್ವನಾಥ, ಅಧ್ಯಕ್ಷ ಮಿಥುನ್ ನಾರಾಯಣ, ಅರ್ಚಕ ವಿಶ್ವನಾಥ ಚಂದು, ಸಮಿತಿ ಸದಸ್ಯರುಗಳಾದ ಜೀವನ್, ಚೇತನ್, ದಿನೇಶ, ವಿನೋದ, ದಾಮು, ರವೀಂದ್ರ ಧರ್ಮು ಹಾಗೂ ಸುಧಾ ಅವರುಗಳ ನೇತೃತ್ವದಲ್ಲಿ ವಾರ್ಷಿಕೋತ್ಸವ ನಡೆಯಿತು.