ನಾಪೋಕ್ಲು, ಏ. 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆಯ, ಭಾಗಮಂಡಲ ವಲಯದ ಬಲ್ಲಮಾವಟಿ ಕಾವೇರಿ ಮಹಿಳಾ ಸಮಾಜದ ಸಮುದಾಯ ಭವನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ. 1 ಲಕ್ಷ ಮೊತ್ತದ ಅನುದಾನವನ್ನು ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್, ಕಾರ್ಯದರ್ಶಿ ನಳಿನಿ ಹಾಗೂ ಪದಾಧಿಕಾರಿಗಳಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಭಾಗಮಂಡಲ ವಲಯ ಮೇಲ್ವಿಚಾರಕ ಕೆ. ಚೇತನ್ ಸೇವಾ ಪ್ರತಿನಿಧಿ ಪೊನ್ನಮ್ಮ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರಾಜಾ ಕುಂಞಪ್ಪ ಹಾಗೂ ಕೋಶಾಧಿಕಾರಿ ತಿಲಕಮ್ಮ ಉಪಸ್ಥಿತರಿದ್ದರು.