ಒಡೆಯನಪುರ, ಏ. 10: ಶ್ರೀ ರಾಮ ನವಮಿ ಪ್ರಯುಕ್ತ ಶನಿವಾರಸಂತೆ ಶ್ರೀ ರಾಮ ಮಂದಿರದಲ್ಲಿ ತಾ.10 ರಿಂದ 14 ರವರೆಗೆ ಪ್ರತಿ ದಿನ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾ.14 ರಂದು ರಾಮ ನವಮಿ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ನವಗ್ರಹ ಪೂಜಾ ಪೂರ್ವಕ ಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀ ರಾಮಚಂದ್ರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪುರುಷ ಸೂಕ್ತ, ನಾರಾಯಣ ಸೂಕ್ತ, ಶ್ರೀ ಸೂಕ್ತ ಜಲಾಭಿಷೇಕ ಮತ್ತು ಅಲಂಕಾರ ಪೂಜೆ ಬೆಳಗ್ಗೆ 10 ಗಂಟೆಯಿಂದ ಮಹಾಗಣಪತಿ ಹೋಮ, ನವಗ್ರಹ ಹೋಮ, ಶ್ರೀ ರಾಮ ತಾರಕ ಹೋಮ ಮತ್ತು ಶ್ರೀ ಆಂಜನೇಯ ಸ್ವಾಮಿಗೆ ಹೋಮ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನದಾನ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ
ತಾ.10 ರಂದು ಶ್ರೀ ರಾಮ ಮಂದಿರದಲ್ಲಿ ದೇವರುಗಳಿಗೆ ಹೂವಿನ ಅಲಂಕಾರ ಪೂಜೆ ಸಲ್ಲಿಸಲಾಯಿತು. ತಾ. 11 ರಂದು (ಇಂದು) ಫಲ ಅಲಂಕಾರ, ತುಳಸಿ ಹಾಗೂ ವೀಳ್ಯದೆಲೆ ಅಲಂಕಾರ ಮತ್ತು ತಾ.13 ರಂದು ಫಲ ಪಂಚಾಮೃತ ಅಭಿಷೇಕ ಹಾಗೂ ವಸ್ತ್ರಾಲಂಕಾರ ಪೂಜಾ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.