ಮಡಿಕೇರಿ, ಏ. 10: ತಾ. 6 ರಂದು ಮಡಿಕೇರಿ ಬ್ಲಾಕ್ನ ಮಕ್ಕಂದೂರು, ಮಾದಾಪುರ, ನಾಪೋಕ್ಲುವಿನ ಹೊದವಾಡ, ಮೂರ್ನಾಡು, ಮರಗೋಡು ಮತ್ತು ಅರೆಕಾಡು, ಮಡಿಕೇರಿ ನಗರಗಳಲ್ಲಿ ಕಾಂಗ್ರೆಸ್ ಮತ್ತು ಜ್ಯಾತ್ಯತೀತ ದಳ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ಅವರು ಮತಯಾಚಿಸಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮತ್ತು ಮಡಿಕೇರಿ ಬ್ಲಾಕ್ ಅಧ್ಯಕ್ಷ ಬಿ.ವೈ. ಅಪ್ರು ರವೀಂದ್ರ, ನಾಪಂಡ ಮುತ್ತಪ್ಪ, ಸಂಜು ತಿಮ್ಮಯ್ಯ, ವಲಯ ಅಧ್ಯಕ್ಷ ಮೋಹನ್ ದಾಸ್ ಮಂದ್ರೀರ, ಪವನ್ ತಿಮ್ಮಯ್ಯ, ಇಬ್ರಾಹಿಂ, ಪೊನ್ನು ಮುತ್ತಪ್ಪ, ಸದಾ ಡೆನ್ನಿಸ್ ಹಾಜರಿದ್ದರು.
ಮಡಿಕೇರಿಯ ಪಿ. ಬ್ಲಾಕ್ನ ಪದಾಧಿಕಾರಿಗಳಾದ ಕೆ.ಎಂ. ವೆಂಕಟೇಶ್, ಪ್ಯಾಟ್ರಿಕ್ ಲೋಬೋ, ಕುಶಾಲಪ್ಪ, ಮುನೀರ್ ಮಾಚಾರ್, ಮೈಕಲ್ ಇನ್ನಿತರು ಪಾಲ್ಗೊಂಡಿದ್ದರು.