ಗೋಣಿಕೊಪ್ಪ ವರದಿ, ಏ. 10 : ಭಗತ್ಸಿಂಗ್ ಯುವಕ ಸಂಘ ಹಾಗೂ ಕರ್ನಾಟಕ ನಾಯರ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಐವರು ಸಾಧಕರುಗಳನ್ನು ಸನ್ಮಾನಿಸಲಾಯಿತು.
ಬೈಪಾಸ್ ರಸ್ತೆಯಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಶೌರ್ಯಪ್ರಶಸ್ತಿ ವಿಜೇತ ಹೆಚ್. ಎನ್. ಮಹೇಶ್, ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಪೂಜಿತ, ಸಮಾಜ ಸೇವಾ ಕ್ಷೇತ್ರದಲ್ಲಿ ಶಿಕ್ಷಣ ರತ್ನ ಪ್ರಶಸ್ತಿ ವಿಜೇತ ಎಂ. ಬಿ. ಅನೀಶ್, ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತರುಗಳಾದ ಹೆಚ್. ಕೆ. ಜಗದೀಶ್ ಹಾಗೂ ಸಣ್ಣುವಂಡ ಕಿಶೋರ್ ನಾಚಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟವನ್ನು ಆರ್ಎಸ್ಎಸ್ ಜಿಲ್ಲಾ ಸಂಘ ಚಾಲಕ ಚೆಕ್ಕೇರ ಮನು ಉದ್ಘಾಟಿಸಿದರು. ಈ ಸಂದರ್ಭ ಭಗತ್ಸಿಂಗ್ ಯುವಕ ಸಂಘ ಅಧ್ಯಕ್ಷ ಸಿಂಗಿ ಸತೀಶ್, ಕೆಎನ್ಎಸ್.ಎಸ್ ಅಧ್ಯಕ್ಷ ಪಿ.ಜಿ. ಪವಿತ್ರನ್, ದಾನಿ ಮನೋಜ್, ಮರ್ಚೆಂಟ್ ಬ್ಯಾಂಕ್ ವ್ಯವಸ್ಥಾಪಕ ಬಿ. ಇ. ಕಿರಣ್, ಭಗತ್ಸಿಂಗ್ ಯುವಕ ಸಂಘ ಪದಾಧಿಕಾರಿ ವಿನೋದ್ ಉಪಸ್ಥಿತರಿದ್ದರು. ಸುಮಾರು 20 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
-ಸುದ್ದಿಪುತ್ರ