ವೀರಾಜಪೇಟೆ, ಏ. 9: ವೀರಾಜಪೇಟೆ ಬಳಿಯ ಹೆಗ್ಗಳ ಮುಖ್ಯರಸ್ತೆಯಿಂದ ರಾಮನಗರ-ಗುಂಡಿಗೆರೆ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸಂಚರಿಸಲು ಕಷ್ಟ ಸಾಧ್ಯದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಗ್ರಾಮಸ್ಥರು ಕೆಲ ಕಾಲ ಈ ರಸ್ತೆ ಮುಂದೆ ನಿಂತು ಪ್ರತಿಭಟನೆಯನ್ನು ನಡೆಸಿದರು.