ಸುಂಟಿಕೊಪ್ಪ, ಏ.9 : ಪಾಳು ಮನೆಯೊಂದರಲ್ಲಿ ಮಲಗಿದ್ದಲ್ಲೇ ಇದ್ದು ಕಳೆದ 2 ತಿಂಗಳಿನಿಂದ ಸರಿಯಾಗಿ ಅನ್ನ ಆಹಾರವಿಲ್ಲದೆ ಬಳಲಿದ್ದ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮರೆದ ಘಟನೆಯ ವರದಿಯಾಗಿದೆ.

ಕೊಡಗಿನ ಗಡಿ ಕುಟ್ಟದ ಪಾಳುಬಿದ್ದ ಮನೆಯೊಂದರಲ್ಲಿ ಆಹಾರ ಶುದ್ಧ ನೀರಿಲ್ಲದೆ ಮಲಗಿದ್ದ ನಿರ್ಗತಿಕ ವ್ಯಕ್ತಿಯನ್ನು ಕುಟ್ಟದ ಆಸ್ಪತ್ರೆಯ ಸಿಬ್ಬಂದಿಯೋರ್ವರು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದರು.

ಜಿಲ್ಲಾ ಆಸ್ಪತ್ರೆಯ ವೈದ್ಯ ಪುರುಷೋತಮ ಅವರು ಆತನಿಗೆ ಚಿಕಿತ್ಸೆ ನೀಡಿ ವಿಚಾರಿಸಿದಾಗ ಹೆಸರು ದಾಸ ಸಂಬಂಧಿಕರು ಯಾರು ಇಲ್ಲ ಎಂದು ತಿಳಿಸಿದ ಮೇರೆ ವೈದ್ಯಾಧಿಕಾರಿ ಸುಂಟಿಕೊಪ್ಪದ ವಿಕಾಸ್ ಜನ ಸೇವಾ ಟ್ರಸ್ಟ್‍ನ ಆಶ್ರಮಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ ಆಶ್ರಮದ ಅಧ್ಯಕ್ಷ ಹೆಚ್.ಕೆ. ರಮೇಶ್ ಸಿಬ್ಬಂದಿ ಗಾಯನ ದಾಸ ಅವರನ್ನು ಆಶ್ರಮಕ್ಕೆ ಕರೆತಂದು ಉಪಚರಿಸಿ ನಡೆದಾಡಲು ವಾಕರ್ ನೀಡಿ ಮಾನÀವೀಯತೆ ಮೆರೆದಿದ್ದಾರೆ.