ಚೆಟ್ಟಳ್ಳಿ, ಏ. 9: ಕೊಟ್ಟಮುಡಿ ಸಮೀಪದ ಹೊದವಾಡದ ಹೈದ್ರೋಸ್ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ. ಉಸ್ಮಾನ್ ತಕ್ಕಪಳ್ಳಿ ಅವರನ್ನು ಮಸೀದಿಯ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಯು. ರಫೀಕ್, ಉಪಾಧ್ಯಕ್ಷರಾಗಿ ಎಂ.ವೈ. ಮಾಯಿನ್, ಸಹ ಕಾರ್ಯದರ್ಶಿಯಾಗಿ ಸಿ.ಎ. ಅಸ್ಲಂ ಸದಸ್ಯರಾಗಿ ಖಾದರ್, ಅಬ್ದುಲ್ ರೆಹಮಾನ್, ಅಬೂಬಕರ್, ಹಮೀದ್, ಸಲಾಂ, ಮೊಹಮ್ಮದ್ ಆಯ್ಕೆಯಾಗಿದ್ದಾರೆ.