ಮಡಿಕೇರಿ, ಏ.8: ಕೊಡಗು ಜಿಲ್ಲಾ ಬಂಟರ ಯುವ ಘಟಕದ ವತಿಯಿಂದ ಬಂಟರ ಸಮುದಾಯ ಬಾಂಧವರ 6ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಮೇ 11 ಮತ್ತು 12ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಬಂಟರ ಯುವ ಘಟಕದ ಅಧ್ಯಕ್ಷ ಶರತ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಎರಡು ದಿನದ ಕ್ರೀಡಾಕೂಟಕ್ಕೆ ಮೇ 11ರಂದು ಬೆಳಗ್ಗೆ ಚಾಲನೆ ನೀಡಲಾಗುವದು.ನಂತರ ಜನಾಂಗ ಬಾಂಧವರಿ ಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಥ್ರೋಬಾಲ್, ವಿವಿಧ ವಿಭಾಗದಲ್ಲಿ 50 ಮೀ. ಮತ್ತು 100 ಮೀ. ಓಟದ ಸ್ಪರ್ಧೆ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಾ.20ರ ಒಳಗಾಗಿ 9448587857, 9900102646 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.(ಮೊದಲ ಪುಟದಿಂದ) ತಾ.21ರಂದು ಮಡಿಕೇರಿಯ ಸಮುದ್ರ ಹೋಟೆಲ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಟೈಸ್ ಹಾಕುವ ಪ್ರಕ್ರಿಯೆ ನಡೆಯಲಿದ್ದು, ಆ ಸಂದರ್ಭ ನೋಂದಾಯಿತ ತಂಡಗಳ ನಾಯಕ ಅಥವಾ ವ್ಯವಸ್ಥಾಪಕರು ಕಡ್ಡಾಯವಾಗಿ ಖುದ್ದು ಹಾಜರಿರಬೇಕಾಗುತ್ತದೆ.

ಹೆಸರು ನೋಂದಣಿ ಮಾಡಿ, ನಾಯಕ ಯಾ ವ್ಯವಸ್ಥಾಪಕರು ಹಾಜರಿರದಿದ್ದಲ್ಲಿ ಆ ತಂಡವನ್ನು ಟೈಸ್ ಪ್ರಕ್ರಿಯೆಗೆ ಪರಿಗಣಿಸಲಾಗುವದಿಲ್ಲ ಎಂದರು.

ಪ್ರದರ್ಶನ ಪಂದ್ಯ - ಮೇ 11ರಂದು ಬೆಳಗ್ಗೆ ಕ್ರೀಡಾಕೂಟ ಉದ್ಘಾಟನೆ ಬಳಿಕ 9 ಗಂಟೆಗೆ ಪತ್ರಕರ್ತರ ತಂಡ ಮತ್ತು ಬಂಟರ ಯುವ ಘಟಕ ತಂಡಗಳ ನಡುವೆ ಪ್ರದರ್ಶನ ಪಂದ್ಯ ಹಮ್ಮಿಕೊಳ್ಳಲಾಗಿದೆ. ಮೇ 12ರಂದು ಬೆಳಗ್ಗೆ 3 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಆಹ್ವಾನಿತ ಕಲಾ ತಂಡ ಹಾಗೂ ಜನಾಂಗದ ಪ್ರತಿಭೆಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾರ್ಯಕ್ರಮ ನೀಡಬಯಸುವ ತಂಡ ಅಥವಾ ಕಲಾವಿದರು ಮೇ 10ರೊಳಗೆ 8861329447, 7019049806 ಬಳಿ ಹೆಸರು ನೋಂದಾಯಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಬಂಟರ ಯುವ ಘಟಕದ ಕಾರ್ಯದರ್ಶಿ ಬಾಲಕೃಷ್ಣ ರೈ(ಅಪ್ಪು), ಖಜಾಂಚಿ ಮಿಥುನ್ ರೈ, ಪ್ರಚಾರ ಸಮಿತಿ ಸಂಚಾಲಕ ಕಿಶೋರ್ ರೈ ಕತ್ತಲೆಕಾಡು, ಮಡಿಕೇರಿ ನಗರ ಬಂಟರ ಮಹಿಳಾ ಸಂಘ ಅಧ್ಯಕ್ಷೆ ಕುಶಲತಾ ಶೆಟ್ಟಿ ಹಾಗೂ ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ ಉಪಸ್ಥಿತರಿದ್ದರು.