ಗುಡ್ಡೆಹೊಸೂರು, ಏ. 8: ರಂಗಸಮುದ್ರದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕೋತ್ಸವವು ಇಂದು ಆರಂಭವಾಗಿದ್ದು, ಮತ್ತು ತಾ. 9 ರಂದು (ಇಂದು) ನಡೆಯಲಿದೆ. ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಂಗಳವಾರ ಕಾವೇರಿ ನದಿ ಸಂಗಮದಲ್ಲಿ ಗಂಗಾಪೂಜೆ ಸ್ನಾನ, ಅಲಂಕೃತ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.