ಸೋಮವಾರಪೇಟೆ, ಏ. 8: ವಿಶ್ವ ಆರೋಗ್ಯ ದಿನದ ಅಂಗವಾಗಿ ತಾ. 10 ರಂದು ಸಾರ್ವಜನಿಕರಿಗೆ ಮಧುಮೇಹ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪುಷ್ಪಗಿರಿ ಜೇಸಿ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ್ ಹೇಳಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಶಿಬಿರ ಆರಂಭಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗೋಷ್ಠಿಯಲ್ಲಿ ಜೇಸಿರೇಟ್ಸ್ ಅಧ್ಯಕ್ಷೆ ಸುಮಲತ ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ವಲಯ ಅಧಿಕಾರಿ ಮಾಯಾ ಗಿರೀಶ್, ಜಂಟಿ ಕಾರ್ಯದರ್ಶಿ ಮೀನಾ ಮಂಜುನಾಥ್, ರುಬೀನಾ ಇದ್ದರು.