ಗೋಣಿಕೊಪ್ಪ ವರದಿ, ಏ. 7: ಕೊಡವ ಸಾಹಿತ್ಯ ಅಕಾಡೆಮಿ 25 ವರ್ಷ ಪೂರೈಸಿದ ಹಿನ್ನೆಲೆ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿಹಬ್ಬ ಆಚರಣೆಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಜೂನ್ 8 ಹಾಗೂ 9 ರಂದು ಆಚರಿಸಲು ತೀರ್ಮಾನಿಸಲಾಯಿತು.

ಕಾವೇರಿ ಕಾಲೇಜು ಸಭಾಂಗಣದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿ, ಎರಡು ದಿನಗಳ ಕಾಲ ಕಾವೇರಿ ಕಾಲೇಜು ಆವರಣದಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಕೊಡಗಿನ ಸಂಸ್ಕøತಿ, ಆಚಾರ-ವಿಚಾರಗಳಿಗೆ ವೇದಿಕೆ ನೀಡಲು ನಿರ್ಧರಿಸಲಾಯಿತು.

ತಾ. 20 ರಂದು ಅಂತಿಮ ಪೂರ್ವ ಸಿದ್ಧತಾ ಸಭೆಯಲ್ಲಿ ಎಲ್ಲಾ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು, ಕಾವೇರಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಹಾಗೂ ಭಾಷೆ, ಸಂಸ್ಕøತಿ ಅಭಿಮಾನಿಗಳನ್ನು ಸೇರಿಸಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ನಿರ್ಧರಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಜ್ಜಿನಿಕಂಡ ಗಣಪತಿ, ಕೊಡವ ಅಕಾಡೆಮಿ ಸದಸ್ಯರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಚಂಗುಲಂಡ ಸೂರಜ್, ಸುಳ್ಳಿಮಾಡ ಭವಾನಿ, ತೋರೇರ ಮುದ್ದಯ್ಯ, ಕುಡಿಯರ ಶಾರದ, ಅಜ್ಜಮಾಡ ಕುಶಾಲಪ್ಪ, ಹಂಚೆಟ್ಟೀರ ಮನು ಮುದ್ದಪ್ಪ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಹಾಗೂ ಹಂಚೇಟೀರ ಫ್ಯಾನ್ಸಿ ಮುತ್ತಣ್ಣ ಇದ್ದರು.

- ಸುದ್ದಿಪುತ್ರ