ಕೂಡಿಗೆ, ಏ. 7: ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ರಾಜ್ಯಮಟ್ಟದ ಕ್ರೀಡಾ ವಿದ್ಯಾರ್ಥಿಗಳ ಪರಿಶೀಲನಾ ಶಿಬಿರ ತಾ. 7 ರಿಂದ 16 ರವರೆಗೆ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯಲ್ಲಿ ನಡೆಯಲಿದೆ.ಈ ಪರಿಶೀಲನಾ ಶಿಬಿರದಲ್ಲಿ ರಾಜ್ಯದ 279 ಬಾಲಕ-ಬಾಲಕಿಯರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ 25 ಕ್ರೀಡಾ ತರಬೇತಿದಾರರು ಪಾಲ್ಗೊಂಡು ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದ್ದಾರೆ. ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ಈಗಾಗಲೇ ಮೊದಲ ಹಂತದ ತೇರ್ಗಡೆಯಲಿ 279 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಹಾಕಿ, ಅಥ್ಲೆಟಿಕ್, ಜಿಮ್ನಾಸ್ಟಿಕ್, ಫುಟ್ಬಾಲ್, ವಾಲಿಬಾಲ್ ಕ್ರೀಡೆಗಳಿಗೆ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯು ಕೂಡಿಗೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ರಾಜ್ಯಮಟ್ಟದ ಕಿರಿಯ ಬಾಲಕ-ಬಾಲಕಿಯರ ಆಯ್ಕೆ ಪ್ರಕ್ರಿಯೆಯು ನಡೆಯಲಿದೆ.