ವೀರಾಜಪೇಟೆ, ಏ. 7: ಕೂಲಿ ಕೆಲಸ ನಿರ್ವಹಿಸಿಕೊಂಡು ಬದುಕು ಕಟ್ಟಿಕೊಂಡಿದ್ದ ವ್ಯಕ್ತಿಯು ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ವೀರಾಜಪೇಟೆ ನಗರದ ಎಫ್.ಎಂ.ಸಿ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಕೆ.ಆರ್. ನಗರದ ದೊಡ್ಡಹೆಗಡನ ಹಳ್ಳಿ ನಿವಾಸಿ ನಾಗರಾಜ್ (65) ನಿನ್ನೆ ಮುಂಜಾನೆ ಶವವಾಗಿ ಪತ್ತೆಯಾದ ವ್ಯಕ್ತಿ. ಈತ ಸ್ವ ಗ್ರಾಮದಿಂದ ನಗರಕ್ಕೆ ಬಂದು ಹಲವು ವರ್ಷಗಳು ಕಳೆದಿದ್ದವು. ಸಿಮೆಂಟ್ ಅಂಗಡಿಯೊಂದರಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಈತ ತಾ.5ರ ರಾತ್ರಿ ವಿಪರಿತ ಮದÀ್ಯ ಸೇವಿಸಿ ವಿಜಯ ಬ್ಯಾಂಕ್ ಸಮೀಪದ ಕಟ್ಟಡದ ಮುಂಭಾಗದಲ್ಲಿ ಮಲಗಿದ್ದ ಎನ್ನಲಾಗಿದೆ. ತಾ. 6ರ ಬೆಳಿಗ್ಗೆ ದಾರಿಹೋಕರು ಅಂಗಾತವಾಗಿ ಮಲಗಿರುವದನ್ನು ಗಮನಿಸಿ ಸಂಶಯದಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವÀವನ್ನು ಸರ್ಕಾರಿ ಅಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.