ವೀರಾಜಪೇಟೆ, ಏ. 7: ಕೊಡಗಿನ ತೋಟದ ಲೈನ್ ಮನೆಗಳಲ್ಲಿ ವಾಸವಿರುವ ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಾರ್ಮಿಕ ಕುಟುಂಬಗಳಿಗೆ ನಿವೇಶನ ಒದಗಿಸುವಂತೆ, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರÀ ಸಂಘದ ಪದಾಧಿಕಾರಿಗಳು ಹಾಗೂ ಇತರ 40 ಕುಟುಂಬಗಳು ಏಕಾಏಕಿ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ; ಜಿಲ್ಲೆಯ ಉನ್ನತ ಮಟ್ಟದ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬಳಿಕ ಇತರೆÀಡೆಗೆ ಸ್ಥಳಾಂತರಗೊಂಡಿದ್ದಾರೆ.
ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿ ಮೀಸಲು ಅರಣ್ಯ ಸರ್ವೆ ಸಂಖ್ಯೆ 123/1 ಪಿ.03 ರಲ್ಲಿ 19.70 ಸೆಂಟ್ ಎಕರೆ ಸ್ಥಳವನ್ನು ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ ಇಲಾಖೆಯ ಹೆಸರಿನಲ್ಲಿ ನೋಂದಣಿಯಾಗಿತ್ತು. ನಂತರದಲ್ಲಿ ವಾಸಕ್ಕೆ ಯೊಗ್ಯವಲ್ಲ ವಾದರಿಂದ ಇಲಾಖೆಯು ಸ್ಥಳವನ್ನು ಕೈಬಿಟ್ಟಿತ್ತು. ವಿವಿಧ ಭಾಗಗಳಲ್ಲಿರುವ ತೋಟದ ಲೈನ್ ಮನೆಯಲ್ಲಿ ವಾಸವಿರುವ ಗಿರಿಜನರು ಕಾಯ್ದಿರಿಸಿದ್ದ ಸ್ಥಳಕ್ಕೆ ಮಾ. 26 ರಂದು ತಾತ್ಕಾಲಿಕ ಬಿಡಾರಗಳನ್ನು ಹೂಡಿದ್ದರು. ಈ ವಿಷಯವನ್ನು ಅರಿತ ತಾಲೂಕು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ತೆರವುಗೊಳಿಸುವಂತೆ ತಿಳಿಸಿದರು. ಆದರೆ ಈ ಸ್ಥಳದಲ್ಲೇ ನಿವೇಶನ ನಮಗೆ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮುಂದಿನ ಕ್ರಮಕ್ಕೆ ಮೇಲಾಧಿಕಾರಿ ಗಳಿಗೆ ಮಾಹಿತಿ ನೀಡಿದರು. ಮಾ. 27 ರಂದು ವೀರಾಜಪೇಟೆ ಡಿ,ವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕ ಕ್ಯಾತೆಗೌಡ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮತ್ತು ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆಯ ಜಿಲ್ಲಾ ಘಟಕದ ಅಧಿಕಾರಿ ಶಿವಕುಮಾರ್ ತಾಲೂಕು ಅಧಿಕಾರಿ ಚಂದ್ರಶೇಖರ್, ಪರಿವೀಕ್ಷಕ ಎನ್.ಬಿ.ನವೀನ್ ಕುಮಾರ್ ಸಿಬ್ಬಂದಿಗಳೊಂದಿಗೆ ಸಂಘಟನೆಯ ಸಂಚಾಲಕ ಪಿ.ಎಸ್ ಮುತ್ತ ಮತ್ತು 10 ಮಂದಿ ನಿರಾಶ್ರಿತರೊಂದಿಗೆ ಮಾತುಕತೆ ಆರಂಭಿಸಿದರು.
ಸಭೆಯಲ್ಲಿ ಈ ವೇಳೆ ಅಧಿಕಾರಿಗಳು ಸದ್ರಿ ಸ್ಥಳವು ಪಶ್ಚಿಮ ಘಟ್ಟ ಪ್ರದೇಶದ ಅಂಚಿನಲ್ಲಿರು ವದರಿಂದ ಸೂಕ್ಷ್ಮ ವಲಯವಾಗಿದೆ. ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದರು. ಅಲ್ಲದೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬೇಕು. ಮತ್ತು ಇರುವಿಕೆಯ ಮಾಹಿತಿ ಒದಗಿಸಬೇಕು ತದ ನಂತರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯ ಅನ್ವಯ ಜ್ಯೇಷ್ಠತೆಯ ಅದಾರದ ಮೇಲೆ ತಮಗೆ ನಿವೇಶನ ಒದಗಿಸಲಾಗುತ್ತದೆ ಎಂದು ಹೇಳಿದರು. ಡಿವೈಎಸ್ಪಿ ನಾಗಪ್ಪ ಅವರು ಚುನಾವಣೆಯು ಮುಂದಿದೆ ತಮ್ಮ ಸಮಸ್ಯೆಗಳನ್ನು ಚುನಾವಣೆಯ ನಂತರ ಚರ್ಚೆ ಮಾಡಿ ನಿವೇಶನ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು. ಇಲಾಖೆಯ ಅಧಿಕಾರಿಗಳ ಹೇಳಿಕೆಗಳಿಗೆ ತಲೆಬಾಗದೆ ಜಿಲ್ಲಾಧಿಕಾರಿ ಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾದಿಕಾರಿ ಅನೀಸ್ ಕಣ್ಮಣಿ ಜಾಯ್ ಇದು ಸೂಕ್ತ ಸಮಯವಲ್ಲ ಕಾಯ್ದಿರಿಸಿರುವ ಸ್ಥಳವನ್ನು ತೆರವುಗೊಳಿಸಿ ತಮ್ಮ ನಿವಾಸಗಳಿಗೆ ಹಿಂದಿರುಗಬೇಕು ಎಂದು ಸೂಚಿಸಿದರು.
ಅಲ್ಲದೆ ಚುನಾವಣೆಯು ಮುಗಿದ ನಂತರ ನಿವೇಶನದ ಬಗ್ಗೆ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದರು. ಆ ಮೇರೆಗೆ ಸದಸ್ಯರು ಹಿಂದಿರುಗಿ ಅದೇ ಸ್ಥಳದಲ್ಲಿ ಜೀವನ ನಡೆಸಲು ಮುಂದಾಗಿದ್ದರು.ಕೆಲವು ದಿನಗಳಿಂದ ಅರಣ್ಯ ಪ್ರದೇಶದ ಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಸಂಘದ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿ ಗಳೊಡನೆ ತಿಳಿಸಲಾಗಿ ಎದುರಾದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಆರಂಭಿಸಿದರು. ಸ್ಥಳದಲ್ಲಿ ನೆಲೆಸಿರುವ ಕುಟುಂಬ ಸದಸ್ಯರೊಂದಿಗೆ ಮಕ್ಕಳು ಸೇರಿದಂತೆ ವಯೋವೃದ್ಧರು ಆಶ್ರಯಿಸಿದ್ದರು.
ಕಳೆದ 9 ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಆಶ್ರಯ ಪಡೆದಿದ್ದ ಕುಟುಂಬಗಳು ಮುಂದೆ ಹೋರಾಟ ಮಾಡುವದಾಗಿ ತಿಳಿಸಿದ ಮೇರೆÀಗೆ ಸ್ಥಳಕ್ಕೆ ತಾ. 4 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಉಪ ವಿಭಾಗಾಧಿಕಾರಿ ಜವರೇಗೌಡ ಹಾಗೂ 100ಕ್ಕೂ ಅಧಿಕ ಮಂದಿ ಪೊಲೀಸರು ಆಗಮಿಸಿದ್ದರು. ಉಪವಿಭಾಗಧಿಕಾರಿ ಮಾತನಾಡಿ ಸ್ಥಳವು ವಾಸಕ್ಕೆ ಯೊಗ್ಯವಲ್ಲ ಮತ್ತು ವನ್ಯ ಮೃಗಗಳಿಂದ ಅನಾಹುತಗಳು ಸಂಭವಿಸಬಹುದು ಇಲ್ಲಿ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಇಲ್ಲ. ಆದುದರಿಂದ ಸ್ಥಳವನ್ನು ತೆರವುಗೊಳಿಸಬೇಕು ಇಲ್ಲಾವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಬದಲಾಗಿ ಕೆದ ಮುಳ್ಳೂರು ಗ್ರಾಮ ಪಂಚಾಯಿತಿಗೆ ಸೇರಿದ ಬಾರಿಕಾಡು ಎಂಬಲ್ಲಿ ಸ್ಥಳ ಗುರುತಿಸಲಾಗಿದ್ದು ತಾವುಗಳು ಗುರುತಿಸಿದ ಸ್ಥಳದಲ್ಲಿ ತಾತ್ಕಾಲಿಕವಾಗಿ ವಾಸ ಮಾಡಬಹುದು ಎಂದು ತಿಳಿಸಿದ ಮೇರೆಗೆ, ಕಾರ್ಮಿಕರು ಒಪ್ಪಿಗೆ ಸೂಚಿಸಿದರು.
ಗಿರಿಜನ ಅಭಿವೃದ್ದಿ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕುಮಾರ್ ಮಾತನಾಡಿ ದಕ್ಷಿಣ ಕೊಡಗಿನ ಬಿರುನಾಣಿ, ಬಾಳಲೆ, ನಿಟ್ಟೂರು ಕಾರ್ಮಾಡು ಕುಟ್ಟ ಪೊನ್ನಂಪೇಟೆ ಶ್ರೀಮಂಗಲ ಮತ್ತು ವಿವಿಧೆÀಡೆಗಳಿಂದ ಆಗಮಿಸಿದ್ದ ಕಾರ್ಮಿಕರು ಕಾನೂನು ಉಲ್ಲಂಘನೆ ಮಾಡಿದಂತಿದೆ ಫಲಾನುಭವಿಗಳ ಸಮಗ್ರ ವಿವರಗಳನ್ನು ಕಲೆಹಾಕಲು ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆಯಾಗಿದು.್ದ ಇಲಾಖೆಯು ನೀಡುವ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಿವೇಶನ ವಂಚಿತರಿಗೆ ನಿವೇಶನ ಒದಗಿಸಲಾಗುತ್ತದೆ ಎಂದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಸುಮಾರು 7 ಎಕ್ರೆ ಸ್ಥಳವನ್ನು ಸಮತಟ್ಟು ಮಾಡಲಾಗಿದ್ದು 120 ಕುಟುಂಬಗಳಿಗೆ 30*40 ಅಳತೆಯ ಸ್ಥಳವನ್ನು ಖಾಯ್ದಿರಿಸಲಾಗಿದೆ ಈ ಸ್ಥಳದಲ್ಲಿ ತಾತ್ಕಾಲಿಕ ಬಿಡಾರ ಹೂಡಲು ಅನುಮತಿ ನೀಡಲಾಗಿದೆ , ಚುನಾವಣೆಯ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಿವೇಶನ ಒದಗಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. -ಕೆ.ಕೆ.ಎಸ್.