ಶನಿವಾರಸಂತೆ, ಏ. 5: ಕೊಡಗು ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ ಬಂದೂಕುಗಳನ್ನು ಲೋಕಸಭಾ ಚುನಾವಣೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ತಂದು ಜಮಾ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ಬಂದೂಕುಗಳನ್ನು ಬಂದೂಕುದಾರರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಿರುತ್ತಾರೆ ಎಂದು ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ ತಿಳಿಸಿದ್ದಾರೆ.