ಗೋಣಿಕೊಪ್ಪ ವರದಿ, ಏ. 5 : ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ತಾ. 6 ರಿಂದ 4 ದಿನಗಳ ಕಾಲ ಶ್ರೀ ಪಾರ್ವತಿ ದೇವಿಯ ಉತ್ಸವ ನಡೆಯಲಿದೆ. ತಾ. 9 ರವರೆಗೆ ನಡೆಯುವ ಉತ್ಸವದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.