ಭಾಗಮಂಡಲ, ಏ. 5: ತಲಕಾವೇರಿ ಕ್ಷೇತ್ರದಲ್ಲಿ ಇಂದಿನಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಚಾಲನೆ ದೊರೆತಿದೆ.

ಕ್ಷೇತ್ರಕ್ಕೆ ಇಂದು ಸಂಜೆ ಆಗಮಿಸಿದ ನೀಲೇಶ್ವರ ಪದ್ಮನಾಭ ತಂತ್ರಿಗಳು ವಿಶೇಷ ಪೂಜೆಯೊಂದಿಗೆ ರಕ್ಷೋಘ್ನ ಹೋಮ ನೆರವೇರಿಸಿದರು. ಈ ಸಂದರ್ಭ ದೇವಾಲಯ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ತಾ. 11ರವರೆಗೆ ನಡೆಯಲಿದೆ.