ಕುಶಾಲನಗರ, ಏ. 5: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ತಟದ ಮರಗಳನ್ನು ನಾಶಗೊಳಿಸುವದರೊಂದಿಗೆ ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದ ಎದುರುಗಡೆ ಬಿದ್ದಿದ್ದ ಭಾರೀ ಗಾತ್ರದ ಮಾವಿನ ಮಾರವೊಂದನ್ನು ಕೆಲವು ವ್ಯಕ್ತಿಗಳು ತುಂಡರಿಸಿ ಸಾಗಾಟ ಮಾಡಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕೂಡಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.