ಗೋಣಿಕೊಪ್ಪ ವರದಿ, ಏ. 4 : ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯುಗಾದಿ ಮತ್ತು ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ. ಅಂದು ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ದೇವಿಗೆ ಅರ್ಚನೆ, ಹಣ್ಣುಕಾಯಿ, ಮಂಗಳಾರತಿ ಸೇವೆ ನಡೆಯಲಿದೆ. ವಾರ್ಷಿಕೋತ್ಸವ ಪ್ರಯುಕ್ತ ಅಂದು ಬೆ. 7.30 ಗಂಟೆಯಿಂದ ಗಣಪತಿ ಹೋಮ, ಪುಣ್ಯಾಹವಾಚನೆ, ಗಣಪತಿ ಹೋಮ, ಶ್ರೀ ಸೂಕ್ತ, ಲಕ್ಷ್ಮಿ ಹೋಮ, ನವಗ್ರಹಗಳಿಗೆ ಕಲಶಾಭಿಷೇಕ, ದೇವಿಗೆ ಸರ್ವಾಲಂಕಾರ, ಮಹಾ ಸಂಕಲ್ಪ, ಮಹಾಮಂಗಳಾರತಿ, ತೀರ್ಥ ವಿತರಣೆ ನಡೆಯಲಿದೆ.