ಮಡಿಕೇರಿ, ಏ. 4: ಕಕ್ಕಬೆ ಯವಕಪಾಡಿ ಗ್ರಾಮದ ಆದೀ ಶ್ರೀ ಪನ್ನಂಗಾಲತಮ್ಮೆ ದೇವರ ಹಬ್ಬ ತಾ. 12-13 ರಂದು ನಡೆಯಲಿದೆ. ತಾ. 12 ರಂದು ಬೆಳಿಗ್ಗೆ 10 ಗಂಟೆಗೆ ಭಂಡಾರ ಬರುವದು, 10.30ಕ್ಕೆ ತಡಂಬು ತೊಳೆಯುವದು, ಮಧ್ಯಾಹ್ನ 1.30ಕ್ಕೆ ಹೊಸ ಕೊಡೆ ಬರುವದು, ಎತ್ತುಹೋರಾಟ, ಭಂಡಾರ ಮತ್ತು ಹರಕೆ ಒಪ್ಪಿಸುವದು. ಸಂಜೆ 5 ಗಂಠೆಗೆ ದೇವರ ಜಳಕ, ರಾತ್ರಿ 9 ಗಂಟೆಗೆ ಚಾಮುಂಡಿ ಬಾರಣಿ, ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ಕುರುಂದ ದೇವರ ಹಬ್ಬ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.