ಸೋಮವಾರಪೇಟೆ, ಏ. 3: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 20ಕ್ಕೂ ಅಧಿಕ ಯುವಕರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರಲ್ಲದೇ, ಉರುಳು ಸೇವೆ ನಡೆಸಿದರು. ದೇವಾಲಯದಲ್ಲಿ ಕುಮಾರ್, ರಾಮು, ಮಣಿ, ಕೀರ್ತಿ, ಸುಧಾಕರ್, ಈಶ, ಜಯರಾಂ, ಕುಮಾರ್, ರಮೇಶ್, ಗಗನ್, ಭಾಸ್ಕರ್, ನಂದ, ಮೋಹನ್, ಸತೀಶ್, ಮಂಜುನಾಥ್, ಸಂತೋಷ್, ಚೇತನ್, ಕೃಷ್ಣ, ಶಿವಣ್ಣ, ಮಂಜು ಅವರುಗಳು ಉರುಳು ಸೇವೆ ಮಾಡಿದರು.