ಪೆರಾಜೆ, ಏ. 3: ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನಲಿರುವ ಪ್ರತಿಭೆಯನ್ನು ಸಮಾಜಕ್ಕೆ ಹಂಚುವ ಕೆಲಸ ಆಗಬೇಕಿದೆ. ಆದ್ದರಿಂದ ಜ್ಞಾನಿಗಳನ್ನು, ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಸಹಾಯಕವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮಾಧವ ಪೆರಾಜೆ ಹೇಳಿದರು.

ದಿ. ಕೇಶವ ಮಾಸ್ಟರ್ ಪೆರಾಜೆ ಅವರ ನೆನಪಿನಲ್ಲಿ ಪೆರಾಜೆಯಲ್ಲಿ ಸ್ಥಾಪಿತವಾದ ಪಯಸ್ವಿನಿ ಬಳಗ ಪೆರಾಜೆ ಇದರ ಪ್ರಥಮ ಕಾರ್ಯಕ್ರಮ ವಾಗಿ ಬೇಸಿಗೆ ಶಿಬಿರದಲ್ಲಿ ಪ್ರಸ್ತಾವಿಕ ವಾಗಿ ಅವರು ಮಾತನಾಡಿದರು.

ಬೇಸಿಗೆ ಶಿಬಿರವು ಜ್ಯೋತಿ ಪ್ರೌಢ ಶಾಲೆಯಲ್ಲಿ ಶಾಲೆಯ ಸಂಚಾಲಕ ಹರಿಶ್ಚಂದ್ರ ಮುಡ್ಕಜೆ ಅವರಿಂದ ಉದ್ಘಾಟನೆಗೊಂಡಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಪುರುಷೋತ್ತಮ ಕೀರ್ಲಾಯ ವಹಿಸಿದ್ದರು. ಪಯಸ್ವಿನಿ ಬಳಗದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಉಸ್ತುವಾರಿ ಯನ್ನು ಸಂಘದ ಕಾರ್ಯದರ್ಶಿ ರೇಖಾ ಅಡ್ಕದ ಮನೆ ವಹಿಸಿದ್ದು, ಸಂಘದ ಪದಾಧಿ ಕಾರಿಗಳು, ಶಾಲಾ ಅಧ್ಯಾಪಕರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ನೆಹರೂ ಮೆಮೋರಿಯಲ್ ಕಾಲೇಜ್‍ನ ಉಪನ್ಯಾಸಕಿ ಅನುರಾಧ ಕುರುಂಜಿ ಇದ್ದರು. ಸಂಘದ ಸಂಚಾಲಕ ಸುಧಾಮ ಪೆರಾಜೆ ವಂದಿಸಿದರು.