ಸೋಮವಾರಪೇಟೆ, ಏ.3: ಸಮೀಪದ ಐಗೂರು ಗ್ರಾಮದ ಕಾಜೂರು ರಸ್ತೆಯಲ್ಲಿರುವ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ಅಮ್ಮನವರ ದೇವಾಲಯದಲ್ಲಿ ತಾ. 4ರಿಂದ (ಇಂದಿನಿಂದ) ದೈವಗಳ ಕೋಲ ಮತ್ತು ನೇಮೋತ್ಸವ, 43ನೇ ವರ್ಷದ ವಾರ್ಷಿಕೋತ್ಸವ ಪೂಜೆಗಳು ನಡೆಯಲಿವೆ ಎಂದು ದೈವದರ್ಶಿ ಆನಂದ್‍ಪೂಜಾರಿ ತಿಳಿಸಿದ್ದಾರೆ.

ತಾ. 4ರಂದು (ಇಂದು) ಬೆಳಿಗ್ಗೆ 8.30ಕ್ಕೆ ಗಣಪತಿ ಹೋಮ, 9 ರಿಂದ ಭಂಡಾರ ಶುದ್ಧೀಕರಣ, ರಾತ್ರಿ 8 ಗಂಟೆಯಿಂದ ಅಣ್ಣಪ್ಪ ಸ್ವಾಮಿ ದರ್ಶನ ನಡೆಯಲಿದೆ. ತಾ. 5ರಂದು ಬೆಳಿಗ್ಗೆ 4 ಗಂಟೆಗೆ 101 ಕಲಶ ಮೆರವಣಿಗೆ, 9.30ರಿಂದ ಮಹಾಪೂಜೆ, 10 ಗಂಟೆಗೆ ಹಣ್ಣುಕಾಯಿ ನೇವೇದ್ಯ ಪೂಜೆ, 11 ಗಂಟೆಗೆ ಆದಿಶಕ್ತಿ ಮಹಾತಾಯಿಯ ದರ್ಶನದ ನಂತರ ಪಾಷಾಣಮೂರ್ತಿ ಅಮ್ಮನವರ ದರ್ಶನ, ಕೊರಗ-ತನಿಯ ದೇವರ ದರ್ಶನ ನಡೆಯಲಿದೆ.

ರಾತ್ರಿ 7 ಗಂಟೆಗೆ ಭಂಡಾರ ಪೂಜೆ, 8.30ಕ್ಕೆ ವಸ್ತ್ರದಾನ, 9.30ಗಂಟೆಯಿಂದ ಪಾಷಾಣಮೂರ್ತಿ, ಶ್ರೀ ಕಲ್ಲುರ್ಟಿ, ಶ್ರೀಗುಳಿಗ, ಕೊರತಿ, ಶ್ರೀ ಪಂಚುರ್ಳಿ, ತಾ. 6ರಂದು ಕೊರಗಜ್ಜ, ಧರ್ಮದೈವಗಳ ಕೋಲ ನೇಮೋತ್ಸವ ನಡೆಯಲಿದೆ ಎಂದು ಆನಂದ್ ಪೂಜಾರಿ ಮಾಹಿತಿ ನೀಡಿದ್ದಾರೆ.

ತಾ. 9ರಂದು ಬೆಳಿಗ್ಗೆ 8 ಗಂಟೆಯಿಂದ 9.30ರವರೆಗೆ ಪಾಷಾಣಮೂರ್ತಿ, ಭದ್ರಕಾಳಿ, ಕುಟ್ಟಿಚಾತನ್, ಕೊರಗ-ತನಿಯ ದೈವಗಳಿಗೆ ಎಡೆ ಸಮರ್ಪಣೆ, 10 ಗಂಟೆಗೆ ಮಂತ್ರದೇವತೆ, ಭದ್ರಕಾಳಿ ಅಮ್ಮನವರ ನೇಮೋತ್ಸವ ನಡೆಯಲಿದೆ.