ಮಡಿಕೇರಿ, ಏ. 3: ಇತ್ತೀಚೆಗೆ ಸುಪಾರಿ ಕೊಲೆ ಆರೋಪದಡಿ ಬಂಧಿತನಾಗಿರುವ ಲಾರಿ ಚಾಲಕ, ಬೊಳ್ಳೂರು ಗುಡ್ಡೆಹೊಸೂರು ನಿವಾಸಿ ಜಯನ್ ಮಡಿಕೇರಿ ತಾಲೂಕು ಲಾರಿ ಮಾಲೀಕರ ಮತ್ತು ಚಾಲಕರ ಸಂಘದ ಸದಸ್ಯನಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷ ಕೆ.ಕೆ. ಶಿವ ಹಾಗೂ ಕಾರ್ಯದರ್ಶಿ ಎಂ. ಶ್ರೀನಿವಾಸ್, ಸಂಘಕ್ಕೂ ಕೊಲೆ ಆರೋಪಿ ಜಯನ್‍ಗೂ ಯಾವದೇ ಸಂಬಂಧವಿಲ್ಲ ಎಂದಿದ್ದಾರೆ.