ಮಡಿಕೇರಿ, ಏ. 3: ಮೂರ್ನಾಡಿನಲ್ಲಿರುವ ‘ಮಕ್ಕಳ ಮನೆ’ ಕಿಡ್ಸ್ ಪ್ಯಾರಡೈಸ್‍ನಲ್ಲಿ ಸ್ನ್ಯಾಕ್ಸ್ ಡೇ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಂಗಡಿ ತಿಂಡಿಗಳ ಮೋಜಿನಲ್ಲಿರುವ ಪುಟಾಣಿಗಳಿಗೆ ವಿಶೇಷವಾಗಿ ಮನೆಯಲ್ಲಿ ಅಮ್ಮಂದಿರು ತಯಾರಿಸಿದ ಶುದ್ಧವಾದ ಸುಮಾರು 25 ಬಗೆಯ ತಿಂಡಿಗಳು ಎಲ್ಲಾ ಪುಟಾಣಿಗಳ ಗಮನಸೆಳೆಯಿತು.
ಪುಟಾಣಿ ಮಕ್ಕಳು ತಮಗಿಷ್ಟವಾದ ಹೋಮ್‍ಮೇಡ್ ತಿಂಡಿಗಳನ್ನು ಸವಿದು ಬಾಯಿ ಚಪ್ಪರಿಸಿದರು. ಪುಟಾಣಿಗಳೊಂದಿಗೆ ಕಿಡ್ಸ್ ಪ್ಯಾರಡೈಸ್ ಮುಖ್ಯಸ್ಥೆ ಪೂರ್ಣಿಮಾ ಸುರೇಶ್ ಮತ್ತು ವನಿತಾ ಅಶ್ವಥ್ ಕಾರ್ಯಕ್ರಮ ನಡೆಸಿಕೊಟ್ಟರು.