ಸಿದ್ದಾಪುರ, ಏ. 3: ಚೆನ್ನಯ್ಯನ ಕೋಟೆಯ ಸಹರಾ ಯೂತ್‍ಕ್ಲಬ್ ವತಿಯಿಂದ ನಡೆಸುವ ಪ್ರೀಮಿಯರ್ ಲೀಗ್ (ಸಿಪಿಎಲ್) ಕ್ರಿಕೆಟ್ ಪಂದ್ಯಾಟದ ಅಂಗವಾಗಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ತಾ. 27 ರಿಂದ 29 ರವರೆಗೆ ಪಂದ್ಯಾಟ ಚೆನ್ನಯ್ಯನ ಕೋಟೆಯ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ.
ಈ ಸಂದರ್ಭ ಚೆನ್ನಯ್ಯನ ಕೋಟೆಯ ಪೊಲೀಸ್ ಉಪ ಠಾಣೆಯ ಮುಖ್ಯ ಪೇದೆ ಕರುಣಾಕರ್, ವಸಂತ ಹಾಗೂ ಸಹರಾ ಯೂತ್ ಕ್ಲಬ್‍ನ ಅಧ್ಯಕ್ಷ ಪ್ರಮೋದ್, ಸರ್ವಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮನ್, ಸಾಗರ್ ಯೂತ್ ಕ್ಲಬ್‍ನ ಅಧ್ಯಕ್ಷ ಹುರೈಸ್, ಗೌರವಾಧ್ಯಕ್ಷ ರತೀಶ್ ಕುಮಾರ್ ಮತ್ತಿತರರು ಇದ್ದರು.