ಸಿದ್ದಾಪುರ, ಏ. 3: ಬರಡಿ ಗ್ರಾಮದ ಕ್ರಿಯೇಟಿವ್ ಕಾರ್ನರ್ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ರಿಯಲ್ ಫೈಟರ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ಟ್ರೈಕ್ ಫೋರ್ಸ್ ತಂಡ ದ್ವಿತೀಯ ಬಹುಮಾನ ಹಾಗೂ ಬ್ರದರ್ಸ್ ತಂಡ ತೃತೀಯ ಬಹುಮಾನ ಪಡೆದುಕೊಂಡಿತು ಇದರೊಂದಿಗೆ ಉತ್ತಮ ಆಟಗಾರನಾಗಿ ರಿಯಲ್ ಫೈಟರ್ ತಂಡದ ಶಿವಕುಮಾರ್, ಆಲ್ ರೌಂಡರ್ ಆಟಗಾರನಾಗಿ ಶರತ್, ಉತ್ತಮ ತಂಡವಾಗಿ ಕ್ಲಬ್ ಬಿವೈಸಿಸಿ ಪ್ರಶಸ್ತಿ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಗ್ರಾಮದ ಪ್ರಮುಖರಾದ ಶ್ರೀನಿವಾಸ್, ವಿನು, ರಜಾಕ್, ರಾಶಿದ್, ನೌಷಾದ್, ಸಿನೀತ್, ವಿಜೇತ್, ಸಾಂಜಿತ್, ರಾಮರಾಜ್, ಮಹೇಂದ್ರ, ಯುನಸ್, ತಂಬಿ, ಮೇಘನಾ, ಜಿತ್ತು, ನಾಸೀರ್, ಶಿವಪ್ಪ, ಶ್ರೀನಿವಾಸ್, ಶಂಶೀರ್, ಆಕ್ಬರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.