ಚೆಟ್ಟಳ್ಳಿ, ಏ. 3: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿಯು ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ ನಡೆಸಲು ನಿರ್ದೇಶಿಸಿದ ಇರ್ಷಾದಿಯ್ಯಾ ಶಿಬಿರ ಸಿದ್ದಾಪುರ ಸಮೀಪದ ಮಟ್ಟಂ ಯೂನಿಟ್‍ನಲ್ಲಿ ನಡೆಯಿತು.

ಯೂನಿಟ್ ಕಾರ್ಯದರ್ಶಿ ನಿಝಾಮುದ್ದೀನ್ ಸ್ವಾಗತ ಭಾಷಣ ಮಾಡಿದರು. ಸಭೆಯನ್ನು ಬಶೀರ್ ಅಝ್ಹರಿ ಕತ್ತಲಕಾಡ್ ಉದ್ಘಾಟಿಸಿದರು. ವೀರಾಜಪೇಟೆ ಶಾಖೆ ಅಧ್ಯಕ್ಷ ಝುಬೈರ್ ಸಅದಿ ಮಾಲ್ದಾರೆ ತರಗತಿಗೆ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾದ್ಯಂತ ಆಯೋಜಿಸಿದ ‘ಕಾನ್ಫಿಡೆನ್ಟ್ ಟೆಸ್ಟ್‍ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೀರ್ತನ ಗಿರೀಶ್ ಮಟ್ಟಂ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಹಲ್ ಅಧ್ಯಕ್ಷ ಹುಸೈನ್, ಕಾರ್ಯದರ್ಶಿ ಕೆ. ಉಮರ್, ಯೂನಿಟ್ ಅಧ್ಯಕ್ಷ ಎಂ. ರಫೀಕ್, ಪಾಲಿಬೆಟ್ಟ ಸೆಕ್ಟರ್ ಕಾರ್ಯದರ್ಶಿ ಜಾಬಿರ್, ಅಶ್ರಫ್ ಝೈನಿ, ರಫೀಕ್ ಸಿ.ಎಂ. ಇನ್ನಿತರರು ಹಾಜರಿದ್ದರು.