*ಗೋಣಿಕೊಪ್ಪಲು, ಮಾ. 31: 129ನೇ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅಮ್ಮತ್ತಿ ಡಾ. ಬಿ.ಆರ್. ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮತ್ತು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ರಾಜ್ಯಮಟ್ಟದ ಮುಕ್ತ 7 ಮಂದಿ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಬಿ.ಆರ್. ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರುಣ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 26 ರಿಂದ 28 ರವರೆಗೆ 3 ದಿನಗಳು ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಗುವದು. ಪ್ರಥಮ ಸ್ಥಾನಕ್ಕೆ ಮೂವತ್ತು ಸಾವಿರ, ದ್ವಿತೀಯ ಸ್ಥಾನಕ್ಕೆ ಇಪ್ಪತ್ತು ಸಾವಿರ ನಗದು ಬಹುಮಾನ ನೀಡಲಾಗುವದು ಎಂದು ಹೇಳಿದರು. ವಿಶೇಷ ಪಂದ್ಯಾವಳಿಯಲ್ಲಿ ಲಯನ್ಸ್ ಕಳತ್ಮಾಡು ಮತ್ತು ಮರಗೋಡು ಮಹಿಳಾ ವಿಭಾಗದ ತಂಡಗಳು ಭಾಗವಹಿಸಿ ಪಂದ್ಯಾಟದ ಆಕರ್ಷಣೆಯನ್ನು ಹೆಚ್ಚಿಸಲಿದ್ದಾರೆ. ಅಲ್ಲದೆ ನಲವತ್ತು ವರ್ಷ ವಯಸ್ಸಿನ ಪುರುಷರ ಹಿರಿಯ ವಿಭಾಗದಲ್ಲಿ ಅಮ್ಮತ್ತಿ ಮತ್ತು ಸುಂಟಿ ಕೊಪ್ಪದ ತಂಡ ಭಾಗವಹಿಸಲಿದ್ದು, ಪಂದ್ಯಾಟಕ್ಕೆ ಮೆರಗು ನೀಡಲಿದ್ದಾರೆ ಎಂದರು. ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೋಜಿಸ ಲಾಗಿದೆ. ಅಮ್ಮತ್ತಿ ಭಾಗದಲ್ಲಿ ಬಹಳಷ್ಟು ಉದಯೋನ್ಮುಖ ಫುಟ್ಬಾಲ್ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಹೊರತರಲು ಹವಣಿಸುತ್ತಿದ್ದಾರೆ. ಈ ಹಿನ್ನೆಲೆ ಡಾ. ಬಿ.ಆರ್. ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಪ್ರತಿಭೆಗಳು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಪೆÇ್ರೀತ್ಸಾಹ ನೀಡಲಾಗುವದು ಎಂದು ಹೇಳಿದರು.
ವಿಶೇಷವಾಗಿ ನಡೆಯುವ ಮಹಿಳೆಯರ ವಿಭಾಗದ ಪಂದ್ಯಾಟಕ್ಕೆ ಚೆನ್ನಯ್ಯನಕೋಟೆ ಗಣಪತಿ ಉತ್ಸವ ಅಧ್ಯಕ್ಷ ಹೆಚ್.ಆರ್. ಪವಿತ್ರ ಪೆÇ್ರೀತ್ಸಾಹಕರ ಬಹುಮಾನ ಹಾಗೂ ನಗದನ್ನು ನೀಡಿ ಪಂದ್ಯಾಟ ತಂಡವನ್ನು ನಿರ್ವಹಿಸಲಿದ್ದಾರೆ.
ಆಸಕ್ತ ತಂಡಗಳು ಏಪ್ರಿಲ್ 25 ರೊಳಗೆ ನೋಂದಾಯಿಸಿಕೊಳ್ಳ ಬಹುದಾಗಿದೆ. ಮೊದಲು ನೋಂದಾಯಿಸಿದ 25 ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ : 9449747742, 9482644300, 9035278430 ಮತ್ತು 8277433962 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಈ ಸಂದರ್ಭ ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಹೆಚ್.ಜಿ. ಮದು ಹಾಗೂ ಸದಸ್ಯ ಅಕಿಲೇಶ್ ಉಪಸ್ಥಿತರಿದ್ದರು.